wasteಕಸದ ಸಮಸ್ಯೆಗೆ ಪರಿಹಾರವೇನು?
ಎಲ್ಲೆಲ್ಲು ನೋಡಿದರೂ ಕಸ! ಇದಕ್ಕೆ ಪರಿಹಾರವೇ ಇಲ್ಲವೇ?
ಸಾಮಾನ್ಯ ಪ್ರಜೆಗಳಾಗಿ ನಾವು ಏನು ಮಾಡಬಹುದು?
ಮೊಟ್ಟಮೊದಲು ನಮ್ಮ ಮನೆಗಳಲ್ಲಿ ಪ್ರತಿಯೊಬ್ಬರೂ ಕಸವನ್ನು ಸರಿಯಾಗಿ ಎಸೆಯುವಂತೆ ನೋಡಿಕೊಳ್ಳಬೇಕು.
ಕೊಳೆಯುವ ಪದಾರ್ಥಗಳನ್ನು ಬೇರೆಯಾಗಿ ಇಟ್ಟುಕೊಂಡು ಅದನ್ನು ಸರಿಯಾದ ಜಾಗದಲ್ಲಿ ಎಸೆಯಬೇಕು.
ಪ್ಲಾಸ್ಟಿಕ್ ಮತ್ತಿತರ ಪದಾರ್ಥಗಳನ್ನು ಶೇಕರಿಸಿ ಇಟ್ಟು ಅದನ್ನು ಮರುಬಳಕೆಗಾಗಿ ಕಳುಹಿಸಬಹುದು. ಪ್ಲಾಸ್ಟಿಕ್ ಬದಲಾಗಿ ಬಟ್ಟೆಯ ಚೀಲಗಳನ್ನು ಉಪಯೋಗಿಸುವ ಅಭ್ಯಾಸವನ್ನು ಎಲ್ಲರೂ ತಮ್ಮದಾಗಿಸಿಕೊಳ್ಳಬೇಕು. ಬೆಂಗಳೂರಿನಂತ ಪಟ್ಟಣದಲ್ಲಿ ಪ್ರತಿಯೊಂದು ಬಡಾವಣೆಯಲ್ಲಿ ಉದ್ಯಾನವನಗಳಿವೆ. ಅಲ್ಲೆಲ್ಲಾ ಸ್ವಲ್ಪ ಜಾಗವನ್ನು ಪ್ರತ್ಯೇಕಿಸಿ ಕೊಳೆಯುವ ಕಸವನ್ನು ಕಾಂಪೋಸ್ಟ್ ತಯಾರಿಸುವ ಏರ್ಪಾಡು ಮಾಡಿದರೆ ಈಗ ಟ್ರಕ್ಕುಗಳಲ್ಲಿ ಸಾಗಿಸುವ ಕಸದ ಪ್ರಮಾಣ ಅರ್ಧರಷ್ಟು ಕಡಿಮೆಯಾಗಬಹುದು.
ಜೊತೆಗೆ ಉದ್ಯಾನವನದ ಗಿಡಗಳಿಗಾಗಿ ಒಳ್ಳೆಯ ಗೊಬ್ಬರವೂ ಸ್ಥಳದಲ್ಲೇ ತಯಾರಾಗಿ ಸಿಗುವುದು. ಈ ಗೊಬ್ಬರ ಹೆಚ್ಹಿನ ಪ್ರಮಾಣದಲ್ಲಿ ತಯಾರಾದರೆ ಇದನ್ನು ಬಡಾವಣೆಯ ಜನರೇ ಉಪಯೋಗಿಸಲೂ ಬಹುದು.
ಸಾಮಾನ್ಯವಾಗಿ ಈ ತರಹದ ಯೋಜನೆಗಳಿಗೆ ಸುಮಾರು ತೊಡಕುಗಳು ಇರುತ್ತವೆ. ಕಸವೆಂದರೆ ದುರ್ವಾಸನೆ ಬರುತ್ತದೆ, ನಾಯಿಗಳು ಬರುತ್ತವೆ ಮುಂತಾದ ಹಲವಾರು ಅಡೆತಡೆಗಳಿರುತ್ತವೆ. ಈ ಎಲ್ಲಾ ಸಮಸ್ಯೆಗಳಿಗೂ ಪರಿಹಾರಗಳಿವೆ.
ಈಗಾಗಲೇ ಹಲವು ಸಂಘ ಸಂಸ್ಥೆಗಳು ಇಂತಹ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡಿ ತೋರಿಸಿವೆ. ಅಂಥವರು ಕಲಿತ ಪಾಠಗಳನ್ನು ಬಳಸಿಕೊಂಡು ಬೆಂಗಳೂರಿನ ಕಸದ ಸಮಸ್ಯೆಯನ್ನು ಖಂಡಿತವಾಗಿಯೂ ಹಗುರಗೊಳಿಸಬಹುದೆಂದು ನನ್ನ ಧೃಢ ನಂಬಿಕೆ
Tuesday, January 20, 2009
Subscribe to:
Posts (Atom)